• : Function split() is deprecated in /home/kala7/public_html/modules/i18n/i18nstrings/i18nstrings.module on line 617.

ಸದಸ್ಯತ್ವ

ಸದಸ್ಯತ್ವದ ಸಾರಾಂಶ:

ಸದಸ್ಯತ್ವ ನಮೂನೆಯನ್ನು ಪಡೆದುಕೊಳ್ಳಲು ದಯಮಾಡಿ ಇಲ್ಲಿ ಕ್ಲಿಕ್ ಮಾಡಿ

ಸಂಘದ ಸಾಮಾನ್ಯ ಕಾರ್ಯಕಾರಿಣಿ ಈ ಕೆಳಕಂಡ ಸದಸ್ಯರಿಂದ ಕೂಡಿರುತ್ತದೆ (೧) ಸಾಮಾನ್ಯ ಸದಸ್ಯರು (೨) ಜೀವಿತಾವಧಿ ಸದಸ್ಯರು (೩) ಕಾರ್ಪೋರೆಟ್ ಸದಸ್ಯರು (೪) ಸನ್ಮಾನಿತ ಸದಸ್ಯರು ಮತ್ತು (೫) ವಿಧ್ಯಾರ್ಥಿ ಸದಸ್ಯರು

ಸದಸ್ಯತ್ವ ಹೊಂದಲು ಇರಬೇಕಾದ ಅರ್ಹತೆಗಳು

(ಅ) ಸಾಮಾನ್ಯ ಸದಸ್ಯತ್ವ

ಸಾಮಾನ್ಯ ಸದಸ್ಯರನ್ನಾಗಿ ಸಂಘದ ಆಡಳಿತ ಮಂಡಳಿಯು ನಿರ್ಧಿಷ್ಟ ಅರ್ಜಿಯ ಮುಖಂತರ ಈ ಕೆಳಕಂಡ ಅರ್ಹತೆವುಳ್ಳ ವ್ಯಕ್ತಿಗಳಿಗೆ ನೀಡಲಾಗುವುದು

(ಅ) ಆಡಳಿತ ಮಂಡಳಿಯು ಅಭಿಪ್ರಾಯದಲ್ಲಿ ಗ್ರ೦ಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಮತ್ತು ಕಳಕಳಿ ಇರುವಂತಹ ಯಾವುದೇ ವ್ಯಕ್ತಿ

(ಆ) ಕ್ಷೇತ್ರದ ಭೋಧನೆ ಮತ್ತು ಸಂಶೋಧನೆ ಕಾರ್ಯಗಳಲ್ಲಿ ನಿರತರಾಗಿರುವ ಮತ್ತು ನಿರತರಾಗಿದ್ದಂತಹ ವ್ಯಕ್ತಿ

(ಇ) ವ್ಯಕ್ತಿಯ ವೃತ್ತಿ ಶಿಕ್ಷಣ ಅರ್ಹತೆ ಮೇರೆಗೆ ಸಾಮಾನ್ಯ ಸದಸ್ಯತ್ವ ನೀಡಲಾಗುವುದು ಆದರೆ ವ್ಯಕ್ತಿಯು ಸದಾ ತನ್ನ ನೈಪುಣ್ಯ ಮತ್ತು ಸೇವೆಯನ್ನು ಸಂಘದ ಕಾರ್ಯಕ್ರಮಗಳಲ್ಲಿ ನೀಡಲು ಸಿದ್ದವಾಗಿರುವುದು.

(ಆ) ಜೀವಿತ ಸದಸ್ಯತ್ವ

(ಅ) ಆಡಳಿತ ಮಂಡಳಿಯ ಅನುಮೋದನೆಯೊಂದಿಗೆ ಸಾಮಾನ್ಯ ಸದಸ್ಯರು ನಿಗಧಿತ ಶುಲ್ಕ ಪವಾತಿಸಿ ಜೀವಿತ ಸದಸ್ಯತ್ವವನ್ನು ಪಡೆಯಬಹುದು.

(ಆ) ಈ ಮೇಲ್ಕಂಡ ಕರಾರನ್ನು ಕೆಲವು ಪ್ರಕರಣಗಳಿಗೆ ಸಡಿಲಿಸಲು ಆಡಳಿತ ಮಂಡಳಿಯು ಶಕ್ತವಾಗಿರುತ್ತದೆ

ಯಾವುದೇ ವ್ಯಕ್ತಿ ಆಡಳಿತ ಮಂಡಳಿಯ ಅನುಮೋದನೆಯೊಂದಿಗೆ ನಿಗಧಿತ ಶುಲ್ಕ ಪವಾತಿಸಿ ಜೀವಿತ ಸದಸ್ಯತ್ವವನ್ನು ಪಡೆಯಬಹುದು

(ಇ) ಕಾರ್ಪೋರೆಟ್ ಸದಸ್ಯತ್ವ
ಯಾವುದೇ ಸಂಘ, ಯಾವುದೇ ವಿಶ್ವವಿದ್ಯಾಲಯದ ವಿಭಾಗ, ಯಾವುದೇ ಸಂಸ್ಥೆ ಗ್ರ೦ಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರದಲ್ಲಿ ಕಾರ್ಯನಿರತವಾಗಿರುವ ನಿರ್ಧಿಷ್ಟ ಅರ್ಜಿಯ ಮುಖೇನ ಸಂಭಂದಪಟ್ಟ ಕೆಲ ನಿರ್ಬಂಧಗಳೊಂದಿಗೆ
ಕಾರ್ಪೋರೆಟ್ ಸದಸ್ಯತ್ವವನ್ನು ಪಡೆಯಬಹುದು.

(ಈ) ಸನ್ಮಾನಿತ ಸದಸ್ಯತ್ವ

ಸಂಘಕ್ಕೆ ಉತ್ತಮ ಸೇವೆ ಸಲ್ಲಿಸಿದಂತಹ ವ್ಯಕ್ತಿಯನ್ನು ಆಡಳಿತ ಮಂಡಳಿಯು ಸಂಘದ ಸನ್ಮಾನಿತ ಸದಸ್ಯನನ್ನಗಿ ನಾಮಕರಣ ಮಾಡಬಹುದು.

(ಉ) ವಿಧ್ಯಾರ್ಥಿ ಸದಸ್ಯತ್ವ

ಗ್ರ೦ಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರದ ವಿಧ್ಯಾರ್ಥಿಗಳು (ಸಂಸ್ಥೆಯ ವಿಭಾಗದ ಮುಖ್ಯಸ್ಥರ ಶಿಫಾರಸ್ಸಿನ ಮೇರೆಗೆ) ವಿಧ್ಯಾರ್ಥಿ ಸದಸ್ಯತ್ವವನ್ನು ಪಡೆಯಬಹುದು.

(ಊ) ಶುಲ್ಕ ಮತ್ತು ವಂತಿಕೆ

(೧) ಸಾಮಾನ್ಯ ಸದಸ್ಯತ್ವದ ವಾರ್ಷಿಕ ವಂತಿಕೆ ೩೦ ರೂಪಾಯಿಗಳು
(೨) ಜೀವಿತ ಸದಸ್ಯತ್ವದ ವಂತಿಕೆ ೩೦೦ ರೂಪಾಯಿಗಳು
(೩) ಕಾರ್ಪೋರೆಟ್ ಸದಸ್ಯತ್ವದವಾರ್ಷಿಕ ವಂತಿಕೆ ೫೦೦ ರೂಪಾಯಿಗಳು
(೪) ವಿಧ್ಯಾರ್ಥಿ ಸದಸ್ಯತ್ವದ ವಾರ್ಷಿಕ ವಂತಿಕೆ ೧೫ ರೂಪಾಯಿಗಳು
(೫) ಈ ಮೇಲ್ಕಂಡ ವಂತಿಕೆಯಲ್ಲದೆ ಎಲ್ಲಾ ಬಗೆಯ ಸದಸ್ಯತ್ವಗಳಿಗೆ ೧೦ ರೂಪಾಯಿಗಳ ಪ್ರವೇಶ ಶುಲ್ಕವಿರುತ್ತದೆ.
(೬) ಸಂಘದ ಸಾಮಾನ್ಯ ಕಾರ್ಯಕಾರಿಣಿ ಸಲಹೆಗಳಂತೆ ಆಡಳಿತ ಮಂಡಳಿಯು ಶುಲ್ಕ ಮತ್ತು ವಂತಿಕೆಯನ್ನು ಪುನರವಲೋಕಿಸುತ್ತದೆ.

(ಋ) ಸದಸ್ಯತ್ವದ ರದ್ದು
(೧) ಸಾಮಾನ್ಯ ಸದಸ್ಯರು ನಿರ್ದಿಷ್ಟ ಶುಲ್ಕ ಪಾವತಿಸದಿದ್ದಾಗ ಅವರ ಸದಸ್ಯತ್ವವನ್ನು ರದ್ದು ಮಾಡಲಾಗುವುದು
(೨) ಯಾವುದೇ ಸದಸ್ಯನ ಮುಂದುವರಿಕೆ ಸಂಘದ ಆಸಕ್ತಿಗೆ ಕುಂದು ಉಂಟುಮಾಡುವುದಾಗಿದ್ದರೆ ಅಂತಹ ಸದಸ್ಯನ ಸದಸ್ಯತ್ವವನ್ನು ಆಡಳಿತ ಮಂಡಳಿಯು ರದ್ದು ಮಾಡಬಹುದಾಗಿದೆ, ಆದರೆ ಕನಿಷ್ಟ ೩ ವಾರಗಳ ನೋಟಿಸ್ ನೀಡಿ ಅವರ ನಡವಳಿಕೆಯನ್ನು ನಿರೂಪಿಸಲು ಸಮಾಯವಾಕಾಶ ನೀಡುವುದು ಅನಿವಾರ್ಯವಾಗಿರುತ್ತದೆ.

ಮರುದಾಖಲಾತಿ

ಆಡಳಿತ ಮಂಡಳಿಯು ನಿರ್ದಿಷ್ಟ ಅರ್ಜಿಯೊಂದಿಗೆ ಯಾವುದೇ ವ್ಯಕ್ತಿಯನ್ನು ಶ್ರೇಷ್ಟತೆಮೇರೆಗೆ ಮರುದಾಖಲೆ ಮಾಡಿಕೊಳ್ಳಬಹುದು.

ಸದಸ್ಯರ ಹಕ್ಕು ಮತ್ತು ಸವಲತ್ತುಗಳು.

೧. ಸಮಾನ್ಯ ಸಭೆಯ ಚರ್ಚೆಗಳಲ್ಲಿ ಭಾಗವಹಿಸುವುದು
೨. ಆಡಳಿತ ಮಂಡಳಿಯ ಸದಸ್ಯರನ್ನು ನಾಮಕರಣ/ಚುನಾಯಿಸುವುದು